ನವದೆಹಲಿ : SBI Home loan : ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹೋಂ ಲೋನ್ ಮತ್ತು ಆಟೋ ಲೋನ್ ಗಳ ಬಡ್ಡಿದರಗಳನ್ನು ಹೆಚ್ಚಿಸಿದೆ. ಅಂದರೆ, ಗೃಹ ಸಾಲಗಳು (Home loan), ವಾಹನ ಸಾಲಗಳು ಇನ್ನು ದುಬಾರಿಯಾಗಲಿವೆ.
ದುಬಾರಿಯಾಗಲಿದೆ ಎಸ್ಬಿಐ ಸಾಲ :
ಮಾಹಿತಿಯ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State bank of India) ಮೂಲ ದರವನ್ನು ಶೇಕಡಾ 0.10ರಷ್ಟು ಹೆಚ್ಚಿಸಿ, ಶೇ 7.40 ಮಾಡಿದೆ. ಪ್ರೈಂ ಲ್ಯಾಂಡಿಂಗ್ ದರವನ್ನು ಕೂಡಾ ಶೇ 0.10 ರಷ್ಟು ಹೆಚ್ಚಿಸಿದೆ. ಅಂದರೆ ಈಗ ಪ್ರೈಂ ಲ್ಯಾಂಡಿಂಗ್ ದರ ಶೇ 12.15 ಆಗಲಿದೆ. ಆದರೆ, MCLR ದರದಲ್ಲಿ ಬ್ಯಾಂಕ್ (Bank) ಯಾವುದೇ ಬದಲಾವಣೆ ಮಾಡಿಲ್ಲ. ಎಸ್ಬಿಐ ಬಹಳ ಸಮಯದ ನಂತರ ಬಡ್ಡಿದರಗಳನ್ನು (Interest rate) ಹೆಚ್ಚಿಸಿದೆ. ಈ ಹಿಂದೆ ಎಸ್ಬಿಐ ಬಡ್ಡಿದರಗಳನ್ನು ಕಡಿತಗೊಳಿಸಿತ್ತು.
ಇದನ್ನೂ ಓದಿ : SBI SME Gold Loan : ಎಸ್ ಬಿಐ ನೀಡುತ್ತಿದೆ ಕಡಿಮೆ ಬಡ್ಡಿದರದಲ್ಲಿ ಚಿನ್ನದ ಮೇಲಿನ ಸಾಲ..!
ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಎರಡು ದಿನಗಳ ಹಿಂದೆ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳೆಯರಿಗೆ ನೀಡುವ ಹೊಂ ಲೋನ್ (Home loan) ಬಡ್ಡಿದರಗಳನ್ನು ಕಡಿತಗೊಳಿಸಿತ್ತು. ಅಲ್ಲದೆ ಇದರೊಂದಿಗೆ ಬ್ಯಾಂಕ್ ಅನೇಕ ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡಿತ್ತು. ಗೃಹ ಸಾಲಕ್ಕೆ ಮಹಿಳೆಯರಿಗೆ 5 ಬೇಸಿಸ್ ಪಾಯಿಂಟ್ಗಳ ಹೆಚ್ಚುವರಿ ರಿಯಾಯಿತಿ ಕೂಡಾ ನೀಡಲಾಗುತ್ತದೆ. ಇದಲ್ಲದೆ, ಆಭರಣಗಳ (Jewelry Shopping) ಖರೀದಿಗೆ ವಿಶೇಷ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ.
ಸಾಲ ಯಾರಿಗಾಗಿ ದುಬಾರಿಯಾಗಲಿದೆ :
ಲ್ಯಾಂಡಿಂಗ್ ರೇಟ್ ಅಥವಾ ಬೇಸ್ ರೇಟ್ ಮೇಲೆ ಸಾಲ ಪಡೆದಿದ್ದರೆ ಗ್ರಾಹಕರಿಗೆ ಎಸ್ಬಿಐ ಸಾಲ ದುಬಾರಿಯಾಗಲಿದೆ. ರೆಪೊ ಲಿಂಕ್ಡ್ ಸಾಲವನ್ನು ತೆಗೆದುಕೊಂಡ ಗ್ರಾಹಕರ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ. ರೆಪೊ (Repo) ಲಿಂಕ್ಡ್ನಲ್ಲಿ ತಮ್ಮ ಸಾಲವನ್ನು ವರ್ಗಾಯಿಸಿದ ಗ್ರಾಹಕರ, ಇಎಂಐ (EMI) ಮೇಲೆ ಕೂಡಾ ಇದು ಯಾವುದೇ ಪರಿಣಾಮ ಬೀರುವುದಿಲ್ಲ.
ಇದನ್ನೂ ಓದಿ : State Bank of India: ಮಹಿಳಾ ದಿನಾಚರಣೆಗೆ 'SBI' ನಿಂದ ಬಂಪರ್ ಗಿಫ್ಟ್..!
ಗೃಹ ಸಾಲ ಕ್ಷೇತ್ರದಲ್ಲಿ ಎಸ್ಬಿಐ ಉತ್ತಮ ಯಶಸ್ಸನ್ನು ಸಾಧಿಸಿದೆ. ಎಸ್ಬಿಐ ಇದುವರೆಗೆ ಒಟ್ಟು 5 ಲಕ್ಷ ಕೋಟಿ ಸಾಲ ನೀಡಿದೆ. 2024 ರ ವೇಳೆಗೆ ಈ ಸಂಖ್ಯೆಯನ್ನು 7 ಲಕ್ಷ ಕೋಟಿಗೆ ಹೆಚ್ಚಿಸುವುದು ಎಸ್ಬಿಐ ಗುರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.